ask-banner
ad-banner
ರಾಜ್ಯ 2026-05-07

ಶೇರ್ ಮಾಡಿ  

*ಅನ್ವೇಷಣೆಯಲ್ಲಿಂದು ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ಪತ್ತೆಯಾದ ಹೊಯ್ಸಳ ಶೈಲಿಯ ಎರಡು ಸುಂದರ ಪ್ರಾಚ್ಯಾವಶೇಷಗಳು..*

ಗದಗ, ಮೇ,7 : ಪ್ರಾಚ್ಯಾವಶೇಷ ಅನ್ವೇಷಣೆ ನಡೆಸಿದ ಸಂದರ್ಭದಲ್ಲಿ ಲಕ್ಕುಂಡಿಯ ದುರ್ಗಾದೇವಿ ಕೆರೆಯಲ್ಲಿ ಹೊಯ್ಸಳ ಶೈಲಿಯ ಅದ್ಭುತವಾದ ಎರಡು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು ಒಂದು ಸುಂದರವಾದ ಕಲಾತ್ಮಕತೆಯಿಂದ ಕೂಡಿದ ದೇವಾಲಯದ ಬಿಡಿ ಭಾಗಗಳಾಗಿವೆ. ಗುರುವಾರ ನಡೆಸಿದ ಅನ್ವೇಷಣೆಯಲ್ಲಿ ಎರಡು ಸುಂದರ ಪ್ರಚ್ಯಾವಶೇಷಗಳು ದೊರೆತಿದ್ದು ಈ ಸುಂದರ ಕೆತ್ತೆನೆಯ ಎರಡೂ ಭಾಗಗಳಲ್ಲಿ ವಾದ್ಯ ನುಡಿಸುತ್ತಿರುವ ಪುರುಷ ಮತ್ತು ನೃತ್ಯನಿರತಳಾಗಿ ತ್ರಿಭಂಗಿಯಲ್ಲಿರುವ ಸ್ತ್ರೀಯ ಶಿಲ್ಪಗಳಿವೆ. ಒಂದು ಶಿಲ್ಪದಲ್ಲಿ ಪುರುಷನು ಮದ್ದಳೆಯನ್ನು ಬಾರಿಸುತ್ತಿದ್ದು, ಅಲಂಕೃತಳಾದ ಸ್ತ್ರೀಯು ನೃತ್ಯ ಮಾಡುತ್ತಿದ್ದರೆ, ಎರಡನೆಯ ಭಾಗದಲ್ಲಿ ಪುರುಷ ವೇಣುವಾದನದಲ್ಲಿ ತಲ್ಲಿನನಾಗಿದ್ದ ಕೆತ್ತನೆಯ ಜೊತೆಗೆ ಮಹಿಳೆಯು ನೃತ್ಯ ನಿರತಳಾಗಿ ನೃತ್ಯ ಸಂಗೀತ ಎರಡರಲ್ಲೂ ಪರಿಣತಳು ಎಂಬುದು ಸ್ಪಷ್ಟವಾಗುತ್ತಿದೆ. ಈ ಎರಡು ಪ್ರಾಚ್ಯಾವಶೇಷಗಳ ಭಾಗಗಳನ್ನು ಗಮನಿಸಿದಾಗ ಈ ಶಿಲ್ಪಗಳ ಮೇಲೆ ಹೊಯ್ಸಳರ ಶೈಲಿಯ ನಿಚ್ಚಳ ಪ್ರಭಾವವಿದ್ದು ಪುರುಷನ ಮೇಲ್ವಸ್ತ್ರ, ಸ್ತ್ರೀಯರ ಉಡುಪು, ಅಲಂಕೃತವಾದ ಕೆತ್ತನೆ ಹೊಂದಿರುವುದಲ್ಲದೆ ವಿಶಿಷ್ಟ ಕೇಶ ವಿನ್ಯಾಸವನ್ನು ಶಿಲ್ಪಿ ಮೂಡಿಸಿದ್ದಾನೆ. ಇದು ಯಾವುದೋ ಅತ್ಯುತ್ಕೃಷ್ಟ ದೇವಾಲಯದ ಬಿಡಿ ಭಾಗವಾಗಿದ್ದು ಹೊಯ್ಸಳ ಕಾಲದ ಅವಶೇಷ ಎನ್ನಲಾಗುತ್ತಿದೆ. ಇನ್ನಷ್ಟು ಅನ್ವೇಷಣೆ ನಡೆಸಿದರೆ ಬಹುತೇಕ ಲಕ್ಕುಂಡಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಬಹುದು.

Anant S. Karkal
ವೀಕ್ಷಣೆ 275

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP