ask-banner
ad-banner
ರಾಜ್ಯ 2026-05-24

ಶೇರ್ ಮಾಡಿ  

*ಚರ್ಚೆಗೆ ಗ್ರಾಸವಾದ ಗದಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಹುಟ್ಟು ಹಬ್ಬಕ್ಕೆ ಶುಭಾಶಯ ಪೋಸ್ಟರ್...* *ಕೈ-ಕಮಲ-ತೆನೆ ಪಕ್ಷಗಳಲ್ಲಿ ಸಂಚಲನ ಸೃಷ್ಟಿಸಿದ ಸಚಿನ್ ಪಾಟೀಲರ ರಾಜಕೀಯ ನಡೆ...*

ಗದಗ,ಮೇ.24 : ಕಳೆದ ನಾಲ್ಕೈದು ವರ್ಷಗಳ ಕಾಲ ಸುದ್ದೀನೆ ಇರದಿದ್ದ ಕಾಂಗ್ರೆಸ್ ಪಕ್ಷದ ಯುವ ನಾಯಕ ಸಚಿನ್ ಡಿ.ಪಾಟೀಲರು ಸೋಷಿಯಲ್ ಮಿಡಿಯಾಗಳಲ್ಲಿ ಪಕ್ಷದ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಮಾನ್ಯರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರುತ್ತಿರುವ ಪೋಸ್ಟರಗಳ ಮೂಲಕ ಸದ್ದಿಲ್ಲದೆ ಸುದ್ದಿಗೆ ಬಂದಿದ್ದರಿಂದ ಇಲ್ಲದ ಚರ್ಚೆಗಳು ರಾಜಕೀಯವಾಗಿ, ರಾಜಕೀಯೇತರವಾಗಿ ಶುರುವಾಗಿದ್ದು ಅಲ್ಲಗಳೆಯಲಾಗದು. ಹುಲಕೋಟಿಯ ಕೆ.ಎಚ್.ಪಾಟೀಲ, ಹಾಲಿ ಸಚಿವರಾದ ಎಚ್ಕೆ ಪಾಟೀಲ, ಸಂತ ಶಾಸಕರೆಂದೆ ಕರೆಯಲ್ಪಡುವ ಡಿ.ಆರ್.ಪಾಟೀಲ ಕುಟುಂಬದ ರಾಜಕೀಯ ಗರಡಿಯ ಕುಡಿಯಾಗಿರುವ ಸಚಿನ್ ಪಾಟೀಲರು ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂಬುದನ್ನು ಒಪ್ಪಲೇಬೇಕು. ಆದರೆ ಇತ್ತೀಚಿನ ಅವರ ರಾಜಕೀಯ ನಡೆ ಕೈ-ಕಮಲ-ತೆನೆ ಪಕ್ಷಗಳು ಸೇರಿದಂತೆ ಸಾರ್ವತ್ರಿಕವಾಗಿ ತೀವ್ರ ಸಂಚಲನ‌ ಮೂಡಿಸಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಕಾರಣ ಕಳೆದ ಎರಡ್ಮೂರು ವಾರಗಳ ಅಂತರದಲ್ಲಿ ಬಿಜೆಪಿ ನಾಯಕರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿರುವ, ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಕೆಪಿಸಿಸಿ ಅಧ್ಯಕ್ಷ, ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಕೆಲವು ಸ್ವಾಮಿಜಿಗಳ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದು, ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ನೀಡಿದ ಸಚಿನ್ ಪಾಟೀಲರ ಫೋಟೋ ಇರುವ ಪೋಸ್ಟರ್ ಗಳು ಹುಬ್ಬೇರಿಸುವಂತೆ ಮಾಡಿವೆಯಲ್ಲದೆ ಇಲ್ಲದ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಮತ್ತಷ್ಟು ಕುತೂಹಲ ಕೆರಳಿಸಿದ್ದು ಬಿಜೆಪಿಗರಿಗೆ ಕೋರಿದ ಶುಭಾಶಯ ಪೋಸ್ಟರ್ ಗಳು. ಗದಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಮತ್ತು ಬಿಜೆಪಿ ನಾಯಕ ವಿಜಯಕುಮಾರ ಗಡ್ಡಿ ಅವರುಗಳಿಗೆ ತಮ್ಮ ಫೋಟೋ ಜೊತೆಗೆ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಪೋಸ್ಟರ್ ಗಳು ಸಾಕಷ್ಟು ಚರ್ಚೆಗಳಿಗೆ ನಾಂದಿ ಹಾಡಿವೆ. ಕಾರಣ ಗದಗ ವಿಧಾನ ಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕರು ಎಚ್ಕೆ ಪಾಟೀಲರು, ಈಗ ಗದಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ರಾಷ್ಟ್ರಮಟ್ಟದ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು, ಎಲ್ಲಕ್ಕೂ ಮಿಗಿಲಾಗಿ ಸಚಿನ್ ಪಾಟೀಲರಿಗೆ ಚಿಕ್ಕಪ್ಪ(ಕಾಕಾ)ರು ಹೌದು. ಇಷ್ಟೇಲ್ಲ ಇರುವಾಗ ಸಚಿನ್ ಪಾಟೀಲರು ಯಾಕೆ ಗದಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟರ್ ಹಾಕುತ್ತಿದ್ದಾರೆ ಎಂಬುದು ಈಗಿರುವ ಯಕ್ಷ ಪ್ರಶ್ನೆ. ಜಾತ್ಯಾತೀತ, ಪಕ್ಷಾತೀತ ನಡೆಯೋ..? ರಾಜು ಕುರುಡಗಿ ಮತ್ತು ವಿಜಯಕುಮಾರ ಗಡ್ಡಿ ಅವರೊಂದಿಗೆ ಇರುವ ಗೆಳೆತನವೋ..? ಅಥವಾ ರಾಜಕೀಯವೇ ಬೇರೆ, ಸಂಬಂಧವೇ ಬೇರೆ ಎಂಬ ಮನೋಭಾವನೆಯೋ..? ವೃತ್ತಿ ಬೇರೆ ಪ್ರವೃತ್ತಿ ಬೇರೆ ಎಂಬ ನಿಲುವೋ..? ಎಲ್ಲರು ಬೇಕು, ಎಲ್ಲರನ್ನು ಪ್ರೀತಿಸೊಣ, ಗೌರವಿಸೋಣ ಎಂಬ ವಿಶಾಲ ಹೃದಯವಂತಿಕೆಯೋ..? ಎಲ್ಲರೊಳಗೊಂದಾಗಿ ಸಾಗುವ ಉದಾರತೆಯೋ..? ಚುನಾವಣೆಗಳೆ ಬೇರೆ.. ಸಂಬಂಧವೇ ಬೇರೆ ಎಂಬ ಆದರ್ಶತೆಯೋ..? ಬಿಜೆಪಿಗರನ್ನು ತಮ್ಮತ್ತ ಸೆಳೆದುಕೊಳ್ಳುವ ರಾಜಕೀಯ ನಡೆಯೋ ಅಥವಾ ಇನ್ನೇನಾದರು ಚಿಂತನೆಯೋ ಗೊತ್ತಿಲ್ಲ ಆದರೆ ಸಚಿನ್ ಪಾಟೀಲರ ಈ ನಡೆ ಮಾತ್ರ ತೀವ್ರ ಚರ್ಚಗಳಿಗೆ ಕಾರಣವಾಗಿದ್ದಂತು ಸುಳ್ಳಲ್ಲ. ಸ್ವಚ್ಛ ಮನಸ್ಸಿನ, ನೇರ ನುಡಿಯ, ಎಲ್ಲರನ್ನು ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಸ್ವಭಾವದ ಸಚಿನ್ ಡಿ.ಪಾಟೀಲರು ಯಾವುದೆ ಕಲ್ಮಶ ಇಲ್ಲದೆ, ರಾಜಕೀಯ ಗೋಜಿಗೆ ಹೋಗದೆ, ಪಕ್ಷಾತೀತ ನಡೆಯೊಂದಿಗಿರುವ ಸಂಬಂಧದ ಹಿನ್ನಲೆಗೆ ಜೋತುಬಿದ್ದು ಈ ಶುಭಾಶಯಗಳ ಪೋಸ್ಟರ್ ಸೋಷಿಯಲ್‌ ಮಿಡಿಯಾಗಳಲ್ಲಿ ಕಾಣಲಾಗುತ್ತಿದೆ ಎಂಬುದನ್ನು ಅವರ ಆಪ್ತರು ಸ್ಪಷ್ಟಪಡಿಸುತ್ತಿರುವುದನ್ಬು ತೆಗೆದು ಹಾಕುವಂತಿಲ್ಲ

Anant S. Karkal
ವೀಕ್ಷಣೆ 1654

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP