ಗದಗ,ಮೇ.26 : ಕರ್ನಾಟಕ ರಾಜ್ಯದ ಸಿಎಂ ಕುರ್ಚಿಗಾಗಿ ನಡೆದ ಕುಸ್ತಿಗೆ ಅಂತಿಮ ನಿರ್ಧಾರ ಕೈಗೊಳ್ಳಲು ದೆಹಲಿಯಲ್ಲಿ ಕೈ ಕಮಾಂಡ್ ಹೈವೋಲ್ಟೇಜ್ ಸಭೆ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ, CWC ಆಹ್ವಾನಿತ ಸದಸ್ಯರಾಗಿದ್ದ, ಸಿದ್ರಾಮಯ್ಯ ಸಚಿವ ಸಂಪುಟದ ಪ್ರಮುಖ ಸಚಿವರಾಗಿರುವ ಎಚ್ಕೆ ಪಾಟೀಲರು ಗದಗದಲ್ಲಿ ಸರಕಾರಿ ಸರಕಾರೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಆಶ್ಚರ್ಯದಿಂದ ಹುಬ್ಬೇರಿಸಿ ಕಣ್ಣರಳಿಸಿ ನೋಡುವಂತಾಗಿದೆ ತೀವ್ರ ಕುತೂಹಲ ಕೆರಳಿಸಿದೆಯಲ್ಲದೆ ನಮ್ಮ ಗೌಡ್ರ ರಾಜಕೀಯದಾಟ ತಿಳಿಯದೋ ತಮ್ಮ ಎನ್ನುವಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕರೆ ಮೆರೆಗೆ ಸೋಮವಾರ ರಾತ್ರಿಯೇ ತೆರಳಿರುವ ಸಿರಂ ಸಿದ್ರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಸೇರಿ ಬಹಳಷ್ಟು ಸಚಿವರು, ಕೆಲವು ಶಾಸಕರು ದೆಹಲಿಯಲ್ಲಿ ತಮ್ಮ ರಾಜಕೀಯದಾಟ ಶುರು ಮಾಡಿದ್ದರೆ ಇತ್ತ ತಮಗೇನು ಸಂಬಂಧವೇ ಇಲ್ಲ ಎಂಬಂತೆ ಸಿದ್ರಾಮಯ್ಯ ಸಚಿವ ಸಂಪುಟದ ಪ್ರಭಾವಿ ಸಚಿವರಾದ ಎಚ್ಕೆ ಪಾಟೀಲ ಗದಗ ನಗರದಲ್ಲಿ ಸುತ್ತಾಡುತ್ತಿರುವುದು ಇಲ್ಲದ ರಾಜಕೀಯ ಲೆಕ್ಕಾಚಾರ ಹುಟ್ಟು ಹಾಕಿವೆ. ಮಂಗಳವಾರ ಬೆಳಗಿನಿಂದಲೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ್ ಸಭೆ ಮೇಲೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಸರಕಾರದ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ, ತೆರುವಾದ ರಾಜ್ಯಸಭೆ ಸ್ಥಾನಗಳ ಚುನಾವಣೆ, ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ಸೇರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸೇರಿ ಪ್ರಮುಖ ಚರ್ಚೆಗಳು ನಡೆದಿವೆ. ಇಂತಹ ಸಭೆಯಿಂದ ದೂರ ಉಳಿದಿರುವ ಕಾಂಗ್ರೆಸ್ ಪ್ರಮುಖ ನಾಯಕ ಎಚ್ಕೆ ಪಾಟೀಲ ನಡೆ ನಿಗೂಢ ಎನ್ನುವಂತಾಗಿದೆ. ಸಿಎಂ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಸಿದ್ರಾಮಯ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದವರು, ಸಿಡಬ್ಲ್ಯೂಸಿ ಆಹ್ವಾನಿತ ಸದಸ್ಯರಾಗಿದ್ದವರು, ರಾಜ್ಯ, ರಾಷ್ಟ್ರ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು, ಗಾಂಧಿ ಕುಟುಂಬಕ್ಕೆ ಆತ್ಮೀಯರಾದವರು, ಈ ಹಿಂದೆ ರಾಜ್ಯದ ಮುಖ್ಯ ಮಂತ್ರಿ ರೇಸಲ್ಲಿ ಮುಂಚೂಣಿಯಾಗಿ ಇದ್ದವರು, 2018ರಲ್ಲಿ ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ನಾಯಕರ ರೇಸಲ್ಲಿದ್ದವರು, 4 ಬಾರಿ ಎಂ.ಎಲ್.ಸಿ. ಮತ್ತು ಮೂರು ಭಾರಿ ವಿಧಾನ ಸಭೆ ಶಾಸಕರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಂತಹ ಕಾಂಗ್ರೆಸ್ ಪ್ರಮುಖ ನಾಯಕ ಎಚ್ಕೆ ಪಾಟೀಲರು ದೆಹಲಿಗೆ ತೆರಳಿದ ನಾಯಕರ ದಂಡಲ್ಲಿ ಕಾಣದೆ ಇರುವುದು ವಿಚಿತ್ರ ಎನ್ನುವಂತಾಗಿದೆ. ಸಿದ್ರಾಮಯ್ಯ ಬಣ, ಡಿಕೆಶಿ ಬಣ ಬಿಟ್ಟು ಕಾಂಗ್ರೆಸ್ ಪಕ್ಷದ ನಿಷ್ಠಾ ಬಣದಲ್ಲಿ ಎಂಬ ಸಂದೇಶವನ್ನು ಸಾರಲು ತಟಸ್ಥರಾಗಿ ದೆಹಲಿಯತ್ತ ಚಿತ್ತ ಹರಿಸಿದೆ ಕ್ಷೇತ್ರದ ಅಭಿವೃದ್ಧಿಯತ್ತ ಚಿತ್ತ ಹರಿಸಿದರಾ ಸಚಿವ ಎಚ್ಕೆ ಪಾಟೀಲ ಎಂಬ ಮಾತುಗಳು ಕೇಳಲಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಕರೆ ಮಾಡಿಲ್ವಾ..? ಕಿತ್ತಾಟದ ರಾಜಕೀಯ ರಗಳೆ ಬೇಡವಾಯ್ತಾ..? ಪಕ್ಷ ನಿಷ್ಠೆನಾ..? ಯಾರ ಬಣದಲ್ಲೂ, ಯಾವ ಬಣದಲ್ಲೂ ಬೇಡವಾಗಿ ದೂರ ಉಳಿದರಾ ಸಚಿವ ಎಚ್ಕೆ ಪಾಟೀಲ ಎಂಬ ಚರ್ಚೆ ನಡೆದಿವೆ. ತಟಸ್ಥ ನೀತಿಗೆ ಜಾರಿ ಕ್ಷೇತ್ರದಲ್ಲಿ ಉಳಿದುಕೊಂಡ್ರಾ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿರುವ ಮಧ್ಯ ನಮ್ಮ ಗೌಡ್ರ ರಾಜಕೀಯ ಆಟ ತಿಳಿಯದೋ ತಮ್ಮ ಎಂಬ ಕುತೂಹಲ ಮಾತುಗಳು ಕೇಳಲಾಗುತ್ತಿರುವುದು ಸುಳ್ಳಲ್ಲ.
© ASK News Kannada. All Rights Reserved. Designed by AGScurate IT Solutions LLP