ask-banner
ad-banner
ರಾಜ್ಯ 2026-05-28

ಶೇರ್ ಮಾಡಿ  

*ಸಿಎಂ ಸಿದ್ರಾಮಯ್ಯನವರ ನಿವಾಸದಲ್ಲಿಯ ಬ್ರೆಕ್ ಫಾಸ್ಟ್ ಸಮಯದಲ್ಲಿ ಸಿಎಂ- ಡಿಸಿಎಂ ಆಲಿಂಗನ ಫೋಟೋ ಎಲ್ಲ ರಾಜಕೀಯ ಲೆಕ್ಕಾಚಾರಕ್ಕು ಬ್ರೇಕ್..* *ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಿ ಸಂಡೆ ಪ್ರಮಾಣ ವಚನ..?*

ಗದಗ,ಮೇ.28 : ರಾಜ್ಯದ ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಿ ರವಿವಾರ 31-5-2026ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂಬುದು ಸ್ಪಷ್ಟವಾಗುತ್ತಿದೆ. ಸಿಎಂ ಸಿದ್ರಾಮಯ್ಯನವರ ಕಾವೇರಿ ನಿವಾಸದಲ್ಲಿ ಗುರುವಾರ ನಡೆಸಿದ ಸಚಿವರೊಂದಿಗಿನ ಬ್ರೆಕ್ ಫಾಸ್ಟ್ ಸಮಯದಲ್ಲಿ ಸಿಎಂ- ಡಿಸಿಎಂ ಮುಖಾಮುಖ ಭೇಟಿಯಾಗಿ ಆಲಿಂಗನ ಮಾಡಿಕೊಂಡ ಫೋಟೋ ಎಲ್ಲ ಅಡೆತಡೆಗೂ ಬ್ರೆಕ್ ಹಾಕಿ ಡಿಕೆಶಿ ಸಿಎಂ ಆಗೊದು ಗ್ಯಾರಂಟಿ ಎಂಬ ಸ್ಪಷ್ಟ ಸಂದೇಶದಿಂದಾಗಿ ಸಂಡೆ ಪ್ರಮಾಣವಚನ ನಡೆಯಲಿದೆ ಎಂಬುದು ತಿಳಿದು ಬಂದು ಬಂದಿದೆ. ಬ್ರೇಕ್ ಫಾಸ್ಟ್ ಸಮಯದಲ್ಲಿ ಡಿಕೆಶಿ ಸಿದ್ರಾಮಯ್ಯನವರ ಕಾಲಿಗೆ ಬಿದ್ದಿದ್ದು, ಆಲಂಗಿಸಿದ್ದ ಸಂದರ್ಭದಲ್ಲಿ ಸಿದ್ರಾಮಯ್ಯನವರು ಡಿಕೆಶಿ ಬೆನ್ನು ತಟ್ಟಿದ್ದು, ಅಭಿನಂದಿಸಿದ್ದು, ಎಲ್ಲ ಅನುಮಾನ, ರಾಜಕೀಯ ಲೆಕ್ಕಾಚಾರಗಳಿಗೂ ಬ್ರೇಕ್ ಬಿದ್ದಿದಂತಾಗಿದೆ. 2023 ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಆಡಳಿತಕ್ಕೆ ಬಂತು. ಈ ಸಂದರ್ಭದಲ್ಲಿ ಸಿಎಂ ರೇಸಲ್ಲಿ ಸಿದ್ರಾಮಯ್ಯ ಮತ್ತು ಡಿಕೆಶಿ ಮಧ್ಯೆ ನೇರ ಫೈಟ್ ನಡೆದಿತ್ತು. ಆಗ ಹೈಕಮಾಂಡ್ ಒಂದು ಸೂತ್ರ ಹೆಣೆದು ಸಿದ್ರಾಮಯ್ಯನವರನ್ನು ಸಿಎಂ ಡಿಸಿಎಂ ಡಿಕೆಶಿಎಂದು ಘೋಷಿಸಿತು. ಎರಡೂವರೆ ವರ್ಷದ ನಂತರ ಸಿದ್ರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಬೇಕಿತ್ತು. ಆದರೆ ಅವರು ಬಿಟ್ಟು ಕೊಡದೆ ಇದ್ದಾಗ ಸಿಎಂ ಕುರ್ಚಿಗಾಗಿ ಕಚ್ಚಾಟ ನಡೆದಿತ್ತು. ಆದರೆ ಅಂತಿಮವಾಗಿ 3 ವರ್ಷದ ನಂತರ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ರಾಮಯ್ಯ ಸಿಎಂ ಸ್ಥಾನಕ್ಕೆ ಬಹುತೇಕ ಗುರುವಾರ ರಾಜೀನಾಮೆ ಕೊಡಲಿರುವುದರಿಂದ ರವಿವಾರ ಡಿ.ಕೆ.ಶಿವಕುಮಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಗ್ಯಾರಂಟಿ ಎನ್ನುವ ಕಾಂಗ್ರೆಸ್ ವಲಯ ಡಿ.ಕೆ.ಶಿವಕುಮಾರ ಸಿಎಂ ಆಗೊದು ಅಷ್ಟೆ ಗ್ಯಾರಂಟಿ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ, ಮತ್ತು ಸಿದ್ರಾಮಯ್ಯನವರ ಬಣಗಳ ಶಾಸಕರ, ಸಚಿವರ ರಾಜಕೀಯ ಎಲ್ಲ ಲೆಕ್ಕಾಚಾರಕ್ಕೆ ಗುರುವಾರದ ನಡೆಸಿದ ಸಿದ್ರಾಮಯ್ಯನವರ ಬ್ರೇಕ್ ಫಾಸ್ಟ್ ಸಮಯದಲ್ಲಿಯ ಸಿದ್ರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಆಲಿಂಗನ ಎಳ್ಳು ನೀರು ಬಿಟ್ಟಂತಾಗಿದೆ.

Anant S. Karkal
ವೀಕ್ಷಣೆ 336

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP