ನರಗುಂದ, ಜೂ.1 : ನರಗುಂದ ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕೆಂದು ಕಡಕ್ ಸೂಚನೆ ಕೊಟ್ಟ ಮಾಜಿ ಸಚಿವರು, ಶಾಸಕ ಸಿ.ಸಿ.ಪಾಟೀಲ್ರು ಈ ಬಗೆಗೆ ನಿರ್ಲಕ್ಷ ತೋರಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನರಗುಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಯಲ್ಲಿ ಪಾಲ್ಗೊಂಡಿದ್ದ ಸಿ.ಸಿ.ಪಾಟೀಲ್ರು ಜನರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು. ಬೇಸಿಗೆ ಕಳೆದು ಮುಂಗಾರು ವಿಳಂಬವಾದ ಕಾರಣ ನರಗುಂದ ಮತಕ್ಷೇತ್ರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಕಾರಣ ಈಗಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮಂದಾಗಬೇಕೆಂದು ಶಾಸಕ ಸಿ.ಸಿ.ಪಾಟೀಲ್ರು ಸೂಚನೆ ನೀಡಿದರು. ನರಗುಂದ ಕ್ಷೇತ್ರದ ಅಭಿವೃದ್ಧಿ ಬಗೆಗೆ ಅಧಿಕಾರಿಗಳ ಜೊತೆಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಶಾಸಕ ಸಿ.ಸಿ.ಪಾಟೀಲರು ಕ್ಷೇತ್ರದ ಜನರ ಸಾರ್ವಜನಿಕ ಸಮಸ್ಯೆಗಳು ತಲೆದೊರದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದರು.
© ASK News Kannada. All Rights Reserved. Designed by AGScurate IT Solutions LLP