ask-banner
ad-banner
ರಾಜ್ಯ 2026-07-04

ಶೇರ್ ಮಾಡಿ  

*ಶ್ರೀ ವೀರೇಶ್ವರ ಪುಣ್ಯಾಶ್ರಮದ ಧಾರ್ಮಿಕ ರಥದ ಚಕ್ರದ ಮತ್ತು ದುರ್ಗಾ ದೇವಿ ದೇವಸ್ಥಾನದ ರಥದ ಚಕ್ರದ ಮೇಲಿರುವ ತಮ್ಮ ಹೆಸರನ್ನು ತೆಗೆದು ಹಾಕಲು ಜಿಲ್ಲಾಧಿಕಾರಿಗಳಿಗೆ ಪೀರಸಾಬ ಕೌತಾಳ ಲಿಖಿತ ಮನವಿ...*

ಗದಗ, ಜು.4 : ಕಳೆದ ಒಂದೆರಡು ವಾರದಿಂದ ವಿವಾದಕ್ಕೆ ಕಾರಣವಾಗಿದ್ದ ದೇಣಿಗೆ ನೀಡಿದ ರಥ ಮತ್ತು ರಥದ ಗಾಲಿಗಳ ಮೇಲೆ ತಾವು ನೀಡಿದ ದಾನದ ಅಭಿಮಾನದ ಮೇರೆಗೆ ಬರೆದ ತಮ್ಮ ಹೆಸರನ್ನು ತೆಗೆದು ಹಾಕುವಂತೆ ಸ್ವತಃ ರಥ ದಾನವಾಗಿ ನೀಡಿದ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ KSRTC ಮಾಜಿ ಉಪಾಧ್ಯಕ್ಷ ಪೀರಸಾಬ ಕೌತಾಳ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ತೀವ್ರ ಆಶ್ಚರ್ಯದ ಜೊತೆಗೆ ಸಾರ್ವತ್ರಿಕವಾಗಿ ಆಶ್ಚರ್ಯವನ್ನುಂಟು ಮಾಡಿದೆ. ಹಿಂದುತ್ವದ ದೇವಾಲಯವಾದ ಗದುಗಿನ ಗ್ರಾಮ ದೇವತೆ ಗಂಗಾಪುರ ಪೇಟೆಯ ದುರ್ಗಾದೇವಿ ಜಾತ್ರೆಗೆ ಮತ್ತು ಅಂದ, ಅನಾಥರ ವೀರೇಶ್ವರ ಪುಣ್ಯಾಶ್ರಮದ ಉಭಯ ಶ್ರೀಗಳ ಜಾತ್ರಾ ರಥೋತ್ಸವಕ್ಕಾಗಿ ದೇಣಿಗೆಗಾಗಿ ರಥಗಳನ್ನು ಪೀರಸಾಬ ಕೌತಾಳ ನೀಡಿದ್ದರಲ್ಲದೆ ಈ ರಥಗಳ ಗಾಲಿಗಳ ಮೇಲೆ ತಮ್ಮ ಹೆಸರನ್ನು ಬರೆಸಿದ್ದು ದೊಡ್ಡ ವಿವಾದ ಸೃಸ್ಟಿಗೆ ಕಾರಣವಾಗಿತ್ತು. ಇದನ್ನು ಸೂಕ್ಷ್ಮವಾಗಿ ಅರಿತ ರಥ ದಾನಿ ಪೀರಸಾಬ ಕೌತಾಳವರು ಶ್ರೀ ವೀರೇಶ್ವರ ಪುಣ್ಯಾಶ್ರಮದ ಧಾರ್ಮಿಕ ರಥದ ಚಕ್ರದ ಮೇಲಿರುವ ಮತ್ತು ದುರ್ಗಾದೇವಿ ರಥದ ಮೇಲಿರುವ ತಮ್ಮ ಹೆಸರನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಕಣ್ಣರಳಿಸಿ ಹುಬ್ಬೇರಿಸಿ ನೋಡುವಂತಾಗಿದೆ. ಪೀರಸಾಬ ಕೌತಾಳ ಸಲ್ಲಿಸಿದ ಮನವಿಯಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ ಜಿಲ್ಲಾಧಿಕಾರಿಗಳೆ ತಮಗೆ ಈ ಪತ್ರದ ಮೂಲಕ ಸಲ್ಲಿಸುವ ನಮ್ಮ ಮನವಿ ಏನೆಂದರೆ, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮವು ಜಗದ್ಗುರು ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳ ಆಶ್ರಮ ತಪೋಭೂಮಿಯಾಗಿದ್ದು, ನಾಡಿನ ಲಕ್ಷಾಂತರ ಭಕ್ತರ ಶ್ರದ್ದಾ ಕೇಂದ್ರವಾಗಿದೆ. ಆಶ್ರಮದ ವಾರ್ಷಿಕ ಮಹಾರಥೋತ್ಸವವು ಅತ್ಯಂತ ಪವಿತ್ರವಾದ ಧಾರ್ಮಿಕ ಆಚರಣೆಯಾಗಿದೆ. ವೀರೇಶ್ವರ ಪುಣ್ಯಾಶ್ರಮಕ್ಕೆ ಲಕ್ಷಾಂತರ ಭಕ್ತರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಪರಂಪರೆಯ ಪ್ರತೀಕ ಧಾರ್ಮಿಕ ಸಂಸ್ಥೆಯಾಗಿದೆ. ಹಾಗೆಯೇ ಗ್ರಾಮ ದೇವತೆ ಗಂಗಾಪೂರ ಪೇಟೆಯ ಶಕ್ತಿ ಮಾತೆ ದುರ್ಗಾದೇವಿಯು ಜನಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಮಠದ ರಥದ ಚಕ್ರದ ಮೇಲೆ ಮತ್ತು ದುರ್ಗಾದೇವಿ ರಥದ ಚಕ್ರದ ಮೇಲೆ ಕೆತ್ತಿರುವ ಒಂದು ಹೆಸರಿನ ಕುರಿತು ಕೆಲವರು ಮನುವಾದಿ, ಕೋಮುವಾದಿ ಸೇರಿದಂತೆ ಹಿಂದುತ್ವದ ಹೆಸರಿನ ಹೋರಾಟಗಾರರು ವಿವಿಧ ರೀತಿಯ ಆರೋಪ- ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಾ ಪುಣ್ಯಾಶ್ರಮದ ಮತ್ತು ದುರ್ಗಾದೇವಿ ದೇವಸ್ಥಾನದ ಹೆಸರಿಗೆ ಕೋಮುವಾದ ಕಳಂಕ ಕಲ್ಪಿಸಿ ಭಕ್ತರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತರುವ ವಾತಾವರಣ ನಿರ್ಮಿಸುತ್ತಿರುವುದು ವಿಷಾಧನೀಯವಾಗಿದೆ. ಇದರಿಂದ ಲಕ್ಷಾಂತರ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಪರ ಅಥವಾ ವಿರೋಧವಾಗಿ ಅಭಿಪ್ರಾಯ ವ್ಯಕ್ತಪಡಿಸದೆ ಪುಣ್ಯಾಶ್ರಮದ ಹಾಗೂ ದುರ್ಗಾದೇವಿ ದೇವಸ್ಥಾನದ ಪಾವಿತ್ರ, ಗೌರವದ ಜೊತೆಗೆ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ವಿವಾದಕ್ಕೆ ಕಾರಣವಾಗಿರುವ ರಥದ ಚಕ್ರದ ಮೇಲೆ ಕೆತ್ತಲಾಗಿರುವ ಹೆಸರನ್ನು ತೆರವುಗೊಳಿಸಲು ತಮ್ಮಲ್ಲಿ ಅರಿಕೆ ಮಾಡುವುದಾಗಿ ರಥಗಳ ದಾನಿ ಪೀರಸಾಬ ಕೌತಾಳ ಅವರು ದಿನಾಂಕ 5-7-2026 ಶನಿವಾರದಂದು ಜಿಲ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದು ತೀವ್ರ ಕುತೂಹಲ ಹಾಗೂ ಆಶ್ಚರ್ಯವನ್ನುಂಟು ಮಾಡಿದೆ. ಗೌರವಾನ್ವಿತ ಪೀಠಾಧಿಪತಿಗಳು ಹಾಗೂ ದುರ್ಗಾದೇವಿ ಟ್ರಸ್ಟ್‌ನ Solo Trustee ಸಂಬಂಧಿತ ಸದಸ್ಯರೊಂದಿಗೆ ಸಮಾಲೋಚಿಸಿ, ಕಾನೂನುಬದ್ಧವಾಗಿ ಪರಿಶೀಲಿಸಿ ಈ ಕ್ರಮದಿಂದ ಪುಣ್ಯಾಶ್ರಮದ ಘನತೆ, ದುರ್ಗಾದೇವಿ ದೇವಸ್ಥಾನ ಇನ್ನಷ್ಟು ವೃದ್ಧಿಯಾಗುವುದರ ಜೊತೆಗೆ, ಅನಗತ್ಯ ವಿವಾದಗಳಿಗೆ ತೆರೆ ಬೀಳುವ ಮೂಲಕ ಪುಣ್ಯಾಶ್ರಮದ ಮತ್ತು ದುರ್ಗಾದೇವಿ ದೇವಸ್ಥಾನದ ಘನತೆ ಮತ್ತು ಸರ್ವಧರ್ಮ ಸಮಭಾವ ಹಾಗೂ ಭಕ್ತರ ನಂಬಿಕೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ಪೀರಸಾಬ ಕೌತಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಸಂಸ್ಥೆಯ ಗೌರವ ಕಾಪಾಡುವುದು ಹಾಗೂ ಸಾರ್ವಜನಿಕ ಸೌಹಾರ್ದತೆ ಉಳಿಸುವ ದೃಷ್ಟಿಯಿಂದ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ನಮ್ಮ ಮನವಿಯ ವಿನಂತಿಯನ್ನು ಕೂಡಲೆ ಜಾರಿಗೊಳಿಸುವಂತೆ ಭಕ್ತಿಪೂರ್ವಕವಾಗಿ ಒತ್ತಾಯಿಸುತ್ತೆನೆಂದು ಪೀರಸಾಬ ಕೌತಾಳ ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಆನಂದ ಜಿ.ಸಾಲಿಗ್ರಾಮ, ದಲಿತ ಸಂಘರ್ಷ ಸಮಿತಿಯ ಶ್ರೀ ರಮೇಶ ಬಿ. ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳಿಗೆ ಸ್ವಯಂ ಪ್ರೇರಿತವಾಗಿ ಮನವಿ ಸಲ್ಲಿಸುವ ಮೂಲಕ ಕೋಮು ಗಲಭೆಗೆ ಆಸ್ಪದ ಕೊಡದ ಪೀರಸಾಬ ಕೌತಾಳವರ ಸಾಮಾಜಿಕ ಕಾಳಜಿಗೆ ಎಲ್ಲ ಜಾತಿ, ಧರ್ಮಿಯರಿಂದ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗುತ್ತಿದೆ. ಪುಣ್ಯಾಶ್ರಮ ಮತ್ತು ದುರ್ಗಾದೇವಿ ರಥದ ಗಾಲಿಗಳ ಮೇಲೆ ಅನ್ಯ ಕೋಮಿನ ದಾನಿಗಳ ಹೆಸರು ಕಂಡು ವಿವಾದ ಸೃಷ್ಟಿಗೆ ಹುನ್ನಾರ ನಡೆಸಿದವರು ಮುದುಡಿಕೊಳ್ಳುವಂತೆ ಮನವಿ ಮಾಡಿರುವ ರಥದ ದಾನಿ ಪೀರಸಾಬ ಕೌತಾಳ ಅವರ ಬಗೆಗೆ ಪ್ರಶಂಸೆಯ ಸುರಿಮಳೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

Anant S. Karkal
ವೀಕ್ಷಣೆ 3309

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP