ask-banner
ad-banner
ರಾಜ್ಯ 2026-07-05

ಶೇರ್ ಮಾಡಿ  

*ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಇಷ್ಟೊಂದು ಕೆಳಮಟ್ಟದ ರಾಜಕಾರಣಕ್ಕಿಳಿತಾರಂದ್ರೆ ಆಶ್ಚರ್ಯ ಆಗುತ್ತೆ : ಎಚ್.ಕೆ. ಪಾಟೀಲ*

ಗದಗ, ಜು, 5 : ಒಬ್ಬ ಮಾಜಿ ಸಿಎಂ, ಹಾಲಿ ಸಂಸದರಾಗಿರುವ ಬಸವರಾಜ ಬೊಮ್ಮಾಯಿಯವರು ಇಷ್ಟೊಂದು ಕೆಳಮಟ್ಟದ ರಾಜಕಾರಣಕ್ಕಿಳಿತಾರಂದ್ರೆ ಆಶ್ಚರ್ಯ ಆಗುತ್ತೆ ಎಂದು ಮಾಜಿ ಸಚಿವರು, ಶಾಸಕ ಎಚ್ಕೆ ಪಾಟೀಲ ವಿಷಾದ ವ್ಯಕ್ತಪಡಿಸಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಸವರಾಜ ಬೊಮ್ಮಾಯಿ ಪರಿಪೂರ್ಣವಾಗಿ ತಿಳಿಯದೆ ಕಪೋಕಲ್ಪಿತವಾಗಿ ತಮ್ಮ ವಿರುದ್ಧ ಹೇಳಿಕೆ ನೀಡಿದ್ದನ್ನು ತಿಳಿದಾಗ ಆಶ್ಚರ್ಯದ ಜೊತೆಗೆ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡ್ರಾ ಬಸವರಾಜ ಬೊಮ್ಮಾಯಿ ಎಂಬ ಪ್ರಶ್ನೆ ಹುಟ್ಟಿಕೊಂಡಿತೆಂದರು. ಮೂರು ಬೂತ್ಗಳ ಮತದಾರರ ಪಟ್ಟಿಯಲ್ಲಿ ಎಚ್.ಕೆ. ಪಾಟೀಲರ ಹೆಸರಿದೆ ಎಂದು ಆರೋಪ ಮಾಡುವ ಮುನ್ನ ಪರಿಪೂರ್ಣವಾಗಿ ಅರಿತುಕೊಂಡು, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡದೆ ಇರುವ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬಗೆಗೆ ಏನು ಹೇಳಬೇಕುಂಬದೆ ಅರ್ಥವಾಗುತ್ತಿಲ್ಲವೆಂದು ಸೂಕ್ಷ್ಮವಾಗಿ ಎಚ್ಕೆ ಪಾಟೀಲ ತಿವಿದರು. ಬೊಮ್ಮಾಯಿಯವರು ಇಷ್ಟೊಂದು ಹಸಿ ಸುಳ್ಳು ಹೇಳಲು ಯಾರಿಂದ, ಯಾವಾಗಿಂದ ಕಲಿತರೋ ಗೊತ್ತಿಲ್ಲ, ಆದರೆ ಈ ಆರೋಪ ಯಾವುದೋ ದುರುದ್ದೇಶದಿಂದ ಕೂಡಿದೆ ಎಂದರು. ಈ ಆರೋಪ ಸಮರ್ಪವಾಗಿ ಸಾಬೀತುಪಡಿಸಬೇಕು ಇಲ್ಲವೆ ಈ ಹೇಳಿಕೆ ತಪ್ಪರ್ಥದಿಂದ ಕೂಡಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡುವ ಜೊತೆಗೆ ಗದಗಿನ ಜನತೆಯ ಕ್ಷಮೆ ಕೇಳಬೇಕೆಂದು ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು. ಹುಲಕೋಟಿಯ ಹನುಮಂತಗೌಡ ಕೃಷ್ಣಗೌಡ ಪಾಟೀಲ (ಎಚ್.ಕೆ. ಪಾಟೀಲ್‌) ಅವರ ಹೆಸರು ಬೂತ್ ನಂಬರ್ 143 (ಕ್ರಮ ಸಂಖ್ಯೆ 161 ಮತ್ತು 183) ಹಾಗೂ ಅಸುಂಡಿಯ ಬೂತ್ ನಂಬರ್ 153 (ಕ್ರಮ ಸಂಖ್ಯೆ 393) ರಲ್ಲಿ ಮೂರು ಬಾರಿ ದಾಖಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಆದರೆ, ಅವರು ಮಾಡಿದ ಆಯಾ ಕ್ರಮ ಸಂಖ್ಯೆಯಲ್ಲಿ ನನ್ನ ಸೇರಿ ಮೂರು ಜನರ ಹೆಸರು ಒಂದೆಯಾಗಿದ್ದು ಇದನ್ನು ಸರಿಯಾಗಿ ತಿಳಿಯದೆ, ಮತದಾರರ ಪಟ್ಟಿಯನ್ನು ಗಮನಿಸದೆ ಬಸವರಾಜ ಬೊಮಾಯಿಯವರು ದುಡುಕಿನಲ್ಲಿ ಈ ಹೇಳಿದ್ದು ಕೇಳಮಟ್ಟದ ರಾಜಕೀಯದ ಪರಮಾವಧಿ ಎಂದು ಎಚ್ಕೆ ಪಾಟೀಲ ಗುಡುಗಿದರು. ರಾಜಕೀಯದಲ್ಲಿ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಚಾರಿತ್ರ್ಯ ವಧೆ ಮಾಡಲು ಯತ್ನಿಸಲು ಹೋಗಿ ಅವರೆ ಜನರೆದರು ಅಪಹಾಸ್ಯಕ್ಕಿಡಾಗಿದ್ದು ನನಗೆ ಬೇಸರ ತರುತ್ತಿದೆ ಎಂದರು. ನನ್ನ 40 ವರ್ಷಗಳ ರಾಜಕೀಯದ ನಡೆ-ನುಡಿಯನ್ನು ಗಮನದಲ್ಲಿಟ್ಟುಕೊಂಡು ಆರೋಪಿಸಬೇಕಿದ್ದ ಬಸವರಾಜ ಬೊಮ್ಮಾಯಿಯವರು ಇನ್ನಾದರು ಪ್ರಜ್ಞಾಪೂರ್ವಕವಾಗಿ ರಾಜಕೀಯ ಮಾಡುವುದನ್ನು ಕಲಿಯಲಿ ಎಂದು ತಿಳಿಹೇಳಿದ ಎಚ್ಕೆ ಪಾಟೀಲರು ಪ್ರಜಾಪ್ರಭುತ್ವದಲ್ಲಿ ಸಿಎಂ ಸ್ಥಾನದಲ್ಲಿ ಕೆಲಸ ಮಾಡಿದವರು ಈ ರೀತಿ ಸಾರ್ವಜನಿಕರನ್ನು ಮೋಸಗೊಳಿಸುವ ಹಾಗೂ ಸುಳ್ಳು ಹೇಳಿ ತಪ್ಪು ದಾರಿಗೆ ತಳ್ಳುವ ರಾಜಕಾರಣಕ್ಕೆ ಇಳಿದಿರುವುದು ದುರ್ದೈವದ ಸಂಗತಿಯಾಗಿದ್ದು ಇಂತಹ ಹೇಳಿಕೆ ತಮಗೆ ಶೋಭೆ ತರುವಂತದ್ದಲ್ಲ ಎಂದು ಕಿವಿಮಾತು ಹೇಳಿದರು. ರಾಜ್ಯ ಹಾಗೂ ದೇಶದ ಹಲವಾರು ಕಡೆಗಳಲ್ಲಿ ಒಂದೇ ಹೆಸರಿನಲ್ಲಿ ಅನೇಕರು ಇರಬಹುದು, ಆದರೆ, ಇಂತಹ ಆರೋಪ ಮಾಡುವುದು ಬಹಳ ದೊಡ್ಡ ತಪ್ಪು ಎಂದು ಹೇಳಿದರು. ಹುಲಕೋಟಿಯ ಹನುಮಂತಗೌಡ ಕೃಷ್ಣಗೌಡ ಪಾಟೀಲ (ಎಚ್.ಕೆ. ಪಾಟೀಲ್) ಅವರ ಹೆಸರು ಬೂತ್ ನಂಬರ್ 143 (ಕ್ರಮ ಸಂಖ್ಯೆ 161 ಮತ್ತು 183) ಹಾಗೂ ಅಸುಂಡಿಯ ಬೂತ್ ನಂಬರ್ 153 (ಕ್ರಮ ಸಂಖ್ಯೆ 393) ಎಚ್.ಕೆ. ಪಾಟೀಲ ಅವರ ಹೆಸರಿದೆ ಎಂದು ಆರೋಪಿಸಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪಷ್ಟನೆ ನೀಡಲು ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಜೊತೆ ಎಚ್‌.ಕೆ. ಪಾಟೀಲ ಹೆಸರಿನ ಮೂವರು ವ್ಯಕ್ತಿಗಳನ್ನು ಮತ್ತು ಅವರ ಮತದಾರ ಚೀಟಿ, ಆಧಾ‌ರ್ ಗುರುತಿನ ಚೀಟಿಯೊಂದಿಗೆ ಪರಿಚಯಿಸಿದ್ದನ್ನು ನೋಡಿದಾಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಆರೋಪ ರಾಜಕೀಯದ ಕನಿಷ್ಠ ನಡೆ ಎಂಬುದು ಸ್ಪಷ್ಟಪಡಿಸಿತು. ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಇತರ ನಾಯಕರಿದ್ದರು.

Anant S. Karkal
ವೀಕ್ಷಣೆ 1322

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP