ಗದಗ ಜು. 6 : ರಾಜ್ಯಾದ್ಯಂತ ನಡೆದಿರುವ SIR (ಎಸ್‌ಐಆರ್) ಪ್ರಕ್ರಿಯೆಯನ್ನು ನಿರ್ಲಕ್ಷ ಮಾಡದೆ ಪ್ರಾಮಾಣಿಕವಾಗಿ ಅರ್ಜಿ ನಮೂನೆ ಭರ್ತಿ ಮಾಡಿ ಸಹಕಾರ ನೀಡಬೇಕಾದದ್ದು ನಮ್ಮೇಲ್ಲರ ಕರ್ತವ್ಯವಾಗಿದೆ. ನಾನು ಕೂಡ SIR (ಎಸ್‌ಐಆರ್) ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಅರ್ಜಿ ನಮೂನೆ ಭರ್ತಿ ಮಾಡುವ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಿದೆ. PART NO.53 BLO(ಬಿಎಲ್ಓ) ಅಧಿಕಾರಿ ಶ್ರೀ ರಶೀದ್ ಅವರು ನನ್ನ ಮನೆಗೆ ಬಂದು ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ವಿವರಿಸಿ ಅರ್ಜಿ ನಮೂನೆ ಭರ್ತಿ ಮಾಡಿಸಿದರು. ನಾನು ನನ್ನ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಿ ಅಧಿಕಾರಿಗಳಿಗೆ ಸಹಕಾರ ನೀಡಿದೆ. BLO ಶ್ರೀ ರಶೀದ್ ಅವರು ಬಹಳಷ್ಟು ಸಮಾದಾನದ ಜೊತೆ SIR ಮಹತ್ವ ತಿಳಿಸಿದರು. ನೀವು ಕೂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಿ ಮನೆ ಮನೆಗೆ ಬರುವ ಅಧಿಕಾರಿಗಳಿಗೆ ಪೂರಕ ಸಹಕಾರ ನೀಡುವ ಮೂಲಕ ನಮ್ಮ ಮತ್ತು ದೇಶದ ಭವಿಷ್ಯದ ಒಳತಿನ SIR ಪ್ರಕ್ರಿಯೆ ಯಶಸ್ವಿಗೊಳಿಸಿ.
© ASK News Kannada. All Rights Reserved. Designed by AGScurate IT Solutions LLP