ask-banner
ad-banner
ರಾಜ್ಯ 2026-07-26

ಶೇರ್ ಮಾಡಿ  

ಪತ್ರಕರ್ತರಿಗಾಗಿ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌.. ರೋಚಕ ಗೆಲುವು ದಾಖಲಿಸಿದ ವಿನ್ನರ್ಸ ತಂಡ.. ಗೆಲುವಿನಂಚಿನಲ್ಲಿ ಎಡವಿದ ನೈಟ್‌ ರೈಡರ್ಸ್‌ ತಂಡ

ಗದಗ: ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಪತ್ರಕರ್ತರಿಗಾಗಿ ಗದಗ ಮೀಡಿಯಾ ಕ್ರಿಕೆಟ್‌ ಲೀಗ್‌ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂದ್ಯಾವಳಿ ಅಂಗವಾಗಿ ಪತ್ರಕರ್ತ ಅನಂತ ಕಾರ್ಕಳ ನೇತೃತ್ವದ ವಿನ್ನರ್ಸ ತಂಡ ಹಾಗೂ ಪತ್ರಕರ್ತ ಎಚ್.ಎಂ. ಶರೀಫನವರ ನೇತೃತ್ವದ ನೈಟ್ ರೈಡರ್ಸ್‌ ತಂಡಗಳ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಪತ್ರಕರ್ತ ಅನಂತ ಕಾರ್ಕಳ ನೇತೃತ್ವದ ವಿನ್ನರ್ಸ ತಂಡ 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನೈಟ್‌ ರೈಡರ್ಸ್‌ ತಂಡದ ಆರಂಭಿಕರಾದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸುರೇಶ ಕಡ್ಲಿಮಟ್ಟಿ ಹಾಗೂ ಉದಯವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಅರುಣಕುಮಾರ ಹಿರೇಮಠ ಅವರು ಉತ್ತಮ ಜೊತೆಯಾಟವಾಡಿದರು. ನಂತರ.ವಿಜಯಸಾಕ್ಷಿ ವರದಿಗಾರ ಗೌಸ್‌ ಬೆಟಗೇರಿ, ರಿಪಬ್ಲಿಕ್‌ ಜಿಲ್ಲಾ ವರದಿಗಾರ ಮಂಜು ಪತ್ತಾರ ಅವರ ಜೊತೆಯಾಟದ ನೆರವಿನಿಂದ ಅಂತಿಮವಾಗಿ ನಿಗದಿತ 8 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 72 ರನ್‌ ಗಳಿಸಿ ವಿನ್ನರ್ಸ ತಂಡಕ್ಕೆ 73 ರನ್‌ಗಳ ಗುರಿ ನೀಡಿತು. 73 ರನ್‌ಗಳ ಗುರಿ ಬೆನ್ನತ್ತಿದ ವಿನ್ನರ್ಸ್‌ ತಂಡವು ಆರಂಭಿಕ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಂತರ ಅಂತಿಮವಾಗಿ ವಿನ್ನರ್ಸ್‌ ತಂಡದ ದಾಂಡಿಗ ಸುವರ್ಣ ಟಿ.ವ್ಹಿ. ಜಿಲ್ಲಾ ವರದಿಗಾರ ಗಿರೀಶ ಕಮ್ಮಾರ ಅವರು ಫೋರ್‌ ಹೊಡೆಯುವ ಮೂಲಕ 2 ಎಸೆತ ಬಾಕಿ ಇರುವಂತೆ 4 ವಿಕೆಟ್‌ ನಷ್ಟಕ್ಕೆ 73 ರನ್‌ ಗಳಿಸಿ ರೋಚಕ ಗೆಲುವು ದಾಖಲಿಸಿತು. ನೈಟ್ ರೈಡರ್ಸ್ ತಂಡದ ಪರವಾಗಿ ಪತ್ರಕರ್ತ ಎಚ್.ಎಂ. ಶರೀಫನವರ, ಸುರೇಶ ಕಡ್ಲಿಮಟ್ಟಿ, ಅರುಣಕುಮಾರ ಹಿರೇಮಠ, ಮಂಜು ಪತ್ತಾರ, ಟಿ.ವ್ಹಿ .9 ಸಂಜೀವ ಪಾಂಡ್ರೆ, ಗೌಸ್ ಬೆಟಗೇರಿ, ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಶರಣು ದೊಡ್ಡೂರ, ಸೇರಿದಂತೆ ಜಿಲ್ಲಾ ವರದಿಗಾರರಾದ ಮಂಜು ಸಾಳೇರ, ಶಂಭು, ಗಣೇಶ ದೊಡ್ಡಮನಿ, ಫಾರೂಖ್ ಮಕಾನದಾರ, ಪ್ರಕಾಶ ಗುದ್ದಿನ ಸೇರಿ ಹಲವರು ಪಂದ್ಯ ಆಡಿದರು. ಇನ್ನು ಪತ್ರಕರ್ತ ಅನಂತ ಕಾರ್ಕಳ ನೇತೃತ್ವದ ವಿನ್ನರ್ಸ ತಂಡದಲ್ಲಿ ಸಿಟಿಟಿವ್ಹಿಯ ಈಶ್ವರ ತಿಪ್ಪರಡ್ಡಿ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಗಿರೀಶ ಕಮ್ಮಾರ, ರತ್ನಾಕರ ವಾಣಿ ಪತ್ರಿಕೆಯ ನಿಂಗನಗೌಡ ಹನಮಗೌಡರ, ಪ್ರಜಾವಾಣಿ ಫೋಟೋಗ್ರಾಫರ್ ಬನೇಶ ಕುಲಕರ್ಣಿ, ವಿಹಾನ ವಾಣಿ ಪತ್ರಿಕೆಯ ಸೂರಜ್ ಮಯೇಕರ, ಪತ್ರಕರ್ತರಾದ ವಿನಾಯಕ ಚೌಡಾಪೂರ, ಶಂಕರ ಗುರಿಕಾರ, ಅಶೋಕ ಹೂಗಾರ, ಅಬ್ದುಲ ನರಗುಂದ, ವಿಜಯ ಕಾಗನೂರಮಠ ಸೇರಿ ಹಲವರು ಆಟವಾಡಿದರು. ಪ್ರೋತ್ಸಾಹಕರಾಗಿ ಚಕ್ರವರ್ತಿ ದಿನಪತ್ರಿಕೆಯ ಟಿ.ಎನ್. ಭಾಂಡಗೆ, ರತ್ನಾಕರವಾಣಿ ದಿನಪತ್ರಿಕೆ ಸಂಪಾದಕರಾದ ಜಗದೀಶ ಪೂಜಾರ, ಆಮಂತ್ರಿತ ಖ್ಯಾತ ಕ್ರಿಕೆಟ್ ಪಟು ಪ್ರದೀಪಕುಮಾರ ಬಸರೂರ ಆಟಗಾರರನ್ನು ಹುರಿದುಂಬಿಸಿದರು.

Anant S. Karkal
ವೀಕ್ಷಣೆ 289

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP