ಗದಗ : ಕಳೆದ ಒಂದೂವರೆ ತಿಂಗಳಿಂದ ನಡೆದಿದ್ದ ಸಚಿವಗಿರಿ ಹಗ್ಗ ಜಗ್ಗಾಟಕ್ಕೆ ಕೊನೆಗೂ ಹೈಕಮಾಂಡ್ ಸೋಮವಾರ 20 ನೂತನ ಸಚಿವರು ಸೇರಿದಂತೆ ವಿಧಾನ ಸಭೆ ಸ್ಪೀಕರ್, ಉಪ ಸ್ಪೀಕರ, ವಿಧಾನ ಪರಿಷತ್ ಸಭಾಮತಿ, ಉಪಸಭಾಪತಿ ಪಟ್ಟಿಯನ್ನು ಪ್ರಕಟಗೊಳಿಸಿದೆ. ಸಿದ್ರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಿ, ಅವರ ಜೊತೆ 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡನೇ ಹಂತದ ಸಚಿವ ಸಂಪುಟದಲ್ಲಿ ಸಚಿವರಾಗಲು ಜಿದ್ದಾಜಿದ್ದಿಗೆ ಬಿದ್ದಿದ್ದ ಸಚಿವ ಆಕಾಂಕ್ಷಿಗಳಲ್ಲಿ ಕೆಲವರಿಗೆ ಲಕ್ ಕೆಲವರಿಗೆ ಕೋಕ್ ಎನ್ನುಂವಂತೆ ಸಚಿವರ ಪಟ್ಟಿಯನ್ನು ಹೈಕಮಾಂಡ ಬಿಡುಗಡೆ ಮಾಡಿದೆ. *ಇವರೆ ನೂತನ 20 ಸಚಿವರು...!* ಕರ್ನಾಟಕ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಗಾಗಿ ಹೊಸ ಸಚಿವರನ್ನು ಸೇರಿಸಿಕೊಳ್ಳುವ ಪ್ರಸ್ತಾವನೆಯನ್ನು ಮಾನ್ಯ ಕಾಂಗ್ರೆಸ್ ಅಧ್ಯಕ್ಷರು ಈ ಕೆಳಗಿನಂತೆ ಅನುಮೋದಿಸಿದ್ದಾರೆ ಎಂದು ನಿಮಗೆ ತಿಳಿಸಲು ಇಚ್ಛಿಸುತ್ತೇವೆ. 1. ಶ್ರೀ ಪಿ. ಎಂ. ನರೇಂದ್ರಸ್ವಾಮಿ 2. ಶ್ರೀ ಶಿವರಾಜ್ ತಂಗಡಗಿ 3. ಶ್ರೀ ರುದ್ರಪ್ಪ ಲಮಾಣಿ 4. ಶ್ರೀ ಕೆ.ಎಸ್. ಬಸವಂತಪ್ಪ 5. ಶ್ರೀ ಬಿ. ನಾಗೇಂದ್ರ 6. ಶ್ರೀ ಟಿ. ರಘುಮೂರ್ತಿ 7. ಶ್ರೀ ಬಿ. ಝಡ್. ಜಮೀರ್ ಅಹ್ಮದ್ ಖಾನ್ 8. ಶ್ರೀ ರಿಜ್ವಾನ್ ಅರ್ಷದ್ 9. ಶ್ರೀ ಸಂತೋಷ್ ಲಾಡ್ 10. ಶ್ರೀ ಮಧು ಬಂಗಾರಪ್ಪ 11. ಶ್ರೀ ಪುಟ್ಟುರಂಗಶೆಟ್ಟಿ 12. ಶ್ರೀ ಮಂಕಾಳ ವೈದ್ಯ 13. ಡಾ. ಅಜಯ್ ಸಿಂಗ್ 14. ಶ್ರೀ ಎನ್. ಚಲುವರಾಯ ಸ್ವಾಮಿ 15. ಶ್ರೀ ಕೆ.ಎಂ ಶಿವಲಿಂಗೆಗೌಡ 16. ಶ್ರೀ ಹೆಚ್.ಸಿ. ಬಾಲಕೃಷ್ಣ 17. ಶ್ರೀಮತಿ ಗಾಯತ್ರಿ ಶಾಂತೇಗೌಡ 18. ಶ್ರೀ ಬಸವರಾಜ ರಾಯರೆಡ್ಡಿ 19. ಶ್ರೀ ವಿಜಯಾನಂದ ಕಾಶಪ್ಪನವರ್ 20. ಶ್ರೀ ಲಕ್ಷ್ಮಣ್ ಸವದಿ *ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿನ ಹುದ್ದೆಗಳಿಗೆ...* ವಿಧಾನಸಭೆ ಸ್ಪೀಕರಾಗಿ ಜಿ.ಎಸ್.ಪಾಟೀಲರು ನೇಮಕವಾಗಿದ್ದಾರೆ. ಉಪಸಭಾಪತಿಗಳಾಗಿ ಎ. ಎಸ್. ಪೊನ್ನಣ್ಣ ನೇಮಕ. ವಿಧಾನ ಪರಿಷತ್ತು ಸಭಾಪತಿಗಳಾಗಿ ಶ್ರೀ ಶ್ರೀ ಸಲೀಂ ಅಹಮದ್, ಉಪಸಭಾಪತಿಗಳಾಗಿ ಶ್ರೀಮತಿ. ಉಮಾಶ್ರೀ ನೇಮಕವಾಗಿದ್ದಾರೆ. ಅಚ್ಚರಿಯ ಬೆಳವಣಿಗೆ ಅಂದ್ರೆ ಕಾಂಗ್ರೆಸ್ ಹಿರಿಯ ನಾಯಕ ಎಚ್ಕೆ ಪಾಟೀಲರಿಗೆ ಮಂತ್ರಿ ಸ್ಥಾನವೂ ಸಿಗಲಿಲ್ಲ. ಸ್ಪೀಕರೂ ಆಗದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
© ASK News Kannada. All Rights Reserved. Designed by AGScurate IT Solutions LLP