ಗದಗ, ಆ. 29 : ಗದಗ ಜಿಲ್ಲೆಯಲ್ಲಿ ಉತ್ತಮ ಸೇವಾಡಳಿತದಲ್ಲಿದ್ದ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರಿ ರೋಹನ್ ಜಗದೀಶ್ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ( ರಾಮನಗರ) ವರ್ಗಾವಣೆಗೊಳಿಸಿ ಸರಕಾರ ಆದೇಶ ಮಾಡಿದೆ. ರಾಜ್ಯ ಸರ್ಕಾರ ಆಡಳಿತ ವ್ಯವಸ್ಥೆಗಾಗಿ ಆಡಳಿತ ಯಂತ್ರಕ್ಕೆ ಮೇಜರ ಸರ್ಜರಿ ಮಾಡಿದ್ದು ನಾಲ್ವರು IAS ಮತ್ತು ಎಸ್ಪಿ ರೋಹನ್ ಜಗದೀಶ್ ಸೇರಿ 15 IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಗದಗ ಜಿಲ್ಲಾ ಎಸ್ಪಿ ರೋಹನ್ ಜಗದೀಶ್ ಅವರ ಜಾಗಕ್ಕೆ ಮಿಥುನ್ ಎಚ್.ಎನ್. ಅವರನ್ನು ನೇಮಿಸಿ ಆದೇಶಿಸಿದೆ. ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದೆ.
© ASK News Kannada. All Rights Reserved. Designed by AGScurate IT Solutions LLP