ask-banner
ad-banner
ರಾಜ್ಯ 2026-09-22

ಶೇರ್ ಮಾಡಿ  

*ಶಾಸಕ ಎಚ್ಕೆ ಪಾಟೀಲರ ಹವಾಜಿಗೆ ನಡುಗಿದ ಸರಕಾರ...* *ಡೆಡ್ ಲೈನ್ ಮುನ್ನವೆ ಗದಗ, ಮುಂಡರಗಿ, ರೋಣ ಬರಪೀಡಿತ ತಾಲೂಕ ಘೋಷಣೆ..*

ಗದಗ, ಸೆ, 22 : 2 ದಿನಗಳ ಹಿಂದೆ ಶಾಸಕ ಎಚ್ಕೆ ಪಾಟೀಲ ನೀಡಿದ ಹವಾಜಿಗೆ ಬಹುತೇಕ ರಾಜ್ಯ ಸರಕಾರ ನಡುಗಿತು ಎಂಬಂತೆ ಡೆಡ್ ಲೈನ ಮುನ್ನವೆ ಬೇಡಿಕೆಯಂತೆ ಗದಗ, ಮುಂಡರಗಿ, ರೋಣ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಮಂಗಳವಾರ. 22-9-2026 ಸರಕಾರ ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದೆ. ಮೊನ್ನೆ ರವಿವಾರ ಮುಳಗುಂದದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಎಚ್ಕೆ ಪಾಟೀಲರು ಸರಕಾರ ಮತ್ತು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಎಚ್ಚರಿಕೆ ನೀಡಿದ್ದರು. ತಮ್ಮ ಸರಕಾರದ ವಿರುದ್ಧವೆ ಕೆಂಡಾಮಂಡಲರಾಗಿದ್ದ ಪ್ರಭಾವಿ ನಾಯಕ ಎಚ್ಕೆ ಪಾಟೀಲರು ಅಕ್ಟೋಬರ್ 2 ರೊಳಗೆ ಗದಗ ತಾಲೂಕನ್ನು ಬರ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ್ದರಲದೆ ಅಕ್ಟೋಬರ್ 10 ರೊಳಗೆ ಗದಗ ಬರ ಪೀಡಿತ ತಾಲೂಕೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಈಗ ಗದಗ ಬರಪೀಡಿತ ಘೋಷಣೆಯಾದಾಗಲೂ ಸಹ ರಾಜಕೀಯ ವಲಯದಲ್ಲಿ ಏನೇನೊ ಚರ್ಚೆಗಳು ನಡೆದಿದ್ದು ಆಶ್ಚರ್ಯ ಎನ್ನುಂತಿದೆ.

Anant S. Karkal
ವೀಕ್ಷಣೆ 776

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP